ಪರಮ ಕರುಣಾಪೂರಿತಾಂಬಾ ಸ್ತೋತ್ರಮ್

ಪರಮ ಕರುಣಾಪೂರಿತಾಂಬಾ ಸ್ತೋತ್ರಮ್ ಬರಿಯ ಪ್ರಾರ್ಥನಾ ಸ್ತೋತ್ರ ಮಾತ್ರವಲ್ಲ, ಅದು ಒಂದು biographical poem, mentioning many events of his life. ದೇವಿಯ ಸ್ತುತಿ ಮಾಡುತ್ತ ಭಕ್ತ ಅವಳನ್ನು परम करुणापूरितांबा ಎಂದರೆ Goddess of Infinite Mercy ಎಂದು ಕರೆದಿದ್ದಾರೆ. ಅದರ PDF ಪ್ರತಿಯನ್ನು ಅಂತರ್ ಜಾಲದಲ್ಲಿ ಅನೇಕಸಲ ನೋಡಿದ್ದೆ. ಕೊನೆಯ ಸಲ ನೋಡಿದ್ದು ಎಪ್ರಿಲ ೧೨, ೨೦೧೬ರಲ್ಲಿ. ಇಂಗ್ಲಿಷಿನಲ್ಲಿ ೧ ರಿಂದ ೩೬ನೆ ಶ್ಲೋಕದವರೆಗೆ ಟಿಪ್ಪಣಿಗಳೂ ಇವೆ. ನಂತರ ಅಂಗಪೂಜಾ ಇದೆ. ಇದೊಂದೆ ಅಲ್ಲ, ಅವರ ಸಂಸ್ಕೃತ ಪದ್ಯ ರಚನೆಗಳಲ್ಲಿ ವೆಂಕಟೇಶ್ವರನ ಕುರಿತಾದುದೂ ಒಂದಾಗಿದೆ.

परम करुणापूरितांबा स्तॊत्रम् -Prayer to Our Mother of Infinite Mercy ಎಂಬುದು ೫೬ ಶ್ಲೋಕಗಳ ಪ್ರಾರ್ಥನಾ ಸ್ತೋತ್ರ/ ಕಾವ್ಯ. ಅದನ್ನು ರಚಿಸಿದವರು ಜೆ. ಸೇತುರಾಮ ಎಂಬ ಮದರಾಸು (ಈಗಿನ ಚೆನ್ನೈ) ಮೂಲದ ವ್ಯಕ್ತಿ.

ಅವರ ಸಂಕ್ಷಿಪ್ತ ಮಾಹಿತಿ : Jayaram Sethuraman, Professor Emeritus, Robert O. Lawton Distinguished Professor, Department of Statistics, Florida State University, Tallahassee. & Courtesy Professor, Department of Religion. ಪ್ರೊ.ಜಯರಾಮ ಸೇತುರಾಮ ನಿವೃತ್ತಿಯ ನಂತರ ಈಗ- ೨೦೦೫ ರ ನಂತರ, ಐ.ಎಸ್.ಐ, ಚೆನೈದಲ್ಲಿ ಫುಲ್ ಬ್ರಾಯಿಟ್ ಸೀನಿಯರ ಲೆಕ್ಚರರ ಆಗಿದ್ದಾರೆ.

೧೯೩೭ರಲ್ಲಿ ಹುಟ್ಟಿದ್ದ ಸೇತುರಾಮ ಅವರ ತಂದೆಗೆ ಹುಬ್ಬಳ್ಳಿಯಲ್ಲಿ ರೇಲ್ವೆಯಲ್ಲಿ ಇಲೆಕ್ಟ್ರಿಕಲ ಇಂಜಿನೀಯರಿಂಗ ವಿಭಾಗದಲ್ಲಿ ಕೆಲಸವಿದ್ದಿತು. ಸೇತುರಾಮ ತಮ್ಮ ತಂದೆಯ ಎಂಟು ಮಕ್ಕಳಲ್ಲಿ ನಾಕನೆಯವರು. ಸಂತ ಮೇರಿ ಹಾಯಸ್ಕೂಲಿನಲ್ಲಿ ಕಲಿಯುತ್ತಿದ್ದರು. ಅದು ಕ್ಯಾಥೋಲಿಕ್ ಜೇಸುಯಿಟ ಶಾಲೆ. ಶಿಕ್ಷಕರಲ್ಲಿ ಕೆಲವರು ಸ್ವಿಝರಲ್ಯಾಂಡ, ಜರ್ಮನಿ, ಫ್ರಾನ್ಸ ಗಳಿಂದ ಬಂದವರು. ೧೩ನೆ ವಯಸ್ಸಿನಲ್ಲಿ, ಅಂದರೆ ೧೯೫೦ರಲ್ಲಿ, ತಂದೆಗೆ ಮದ್ರಾಸಿಗೆ ವರ್ಗವಾಗಿ ಈ ಶಾಲೆ ಬಿಟ್ಟು ಅಲ್ಲಿಗೆ ಹೋದರು. ಅಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿದಾಗ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮರಾಗಿ ಬಂದರು.

ಮುಂದೆ ೧೯೬೨ರಲ್ಲಿ ಇಂಡಿಯನ ಸ್ಟ್ಯಾಟಿಸ್ಟಿಕಲ ಇನಸ್ಟಿಟ್ಯೂಟ ದಿಂದ ಪಿ.ಎಚ್.ಡಿ. ಮಾಡಿ ಡಾಕ್ಟರೇಟ ಪದವಿ ಪಡೆದರು. ಫ್ಲೋರಿಡಾ ಸ್ಟೇಟ ಯುನಿವರ್ಸಿಟಿ ಅವರು ಪ್ರೊಫೆಸರ ಆಗಿ ಸೇರಿಕೊಂಡದ್ದು ೧೯೬೮ರಲ್ಲಿ. ಇದರ ಮೊದಲು ಮತ್ತು ನಂತರ ಅವರು ಕೆಲಸ ಮಾಡಿದ ಕೆಲ ವಿಶ್ವ ವಿದ್ಯಾಲಯಗಳು – ಯುನಿವರ್ಸಿಟಿ ಆಫ ಕರೋಲಿನಾ, ಮಿಚಿಗನ ಸ್ಟೇಟ ಯುನಿವರ್ಸಿಟಿ, ಸ್ಟ್ಯಾನಫೋರ್ಡ ಯುನಿವರ್ಸಿಟಿ, ಯುನಿವರ್ಸಿಟಿ ಆಫ ಪಿಟ್ಸಬರ್ಗ ಮತ್ತು ಇಂಡಿಯನ ಸ್ಟ್ಯಾಟಿಸ್ಟಿಕಲ ಇನಸ್ಟಿಟ್ಯೂಟ.

 

amba-st2

ತಡಸಲೂರ ಮಳಗಲಿ ದಾನಪತ್ರ – ವೆಂಕಟಾಚಾರ್ಯರ ಹೆಸರಿನಲ್ಲಿರುವ ಕಾಗದ

ಪುಟ – ೧

ಪುಟ – ೨

 

 

 

 

 

 

 

 

 

 

 

 

 

ಲಿಪ್ಯಂತರ

वेदमूर्ति राजश्री वेंकटाचार्य बिन्न वा
सुदेवाचार्य जोशि मंगळवेडेकर वस्ति
मुरगोड स्वामिचे सेवेसि
विद्यार्थी विसाजी रघुनाथ सुभेदार प
रगणा मुरगोड साष्टांग नमस्कार विनंति एसेजे तुम्ही
ब्राह्मण सत्पात्र कुटुंब वत्सल योगक्षेम
चालवून म्हणून फार प्रकार सांगून घेतला
वरून आपल योगक्षेम पूर्ति काही जमीन
इनाम करून द्यावा असे चिंतून परगणे
मजकूर पैकी
०॥ मौजे मळगली पैकी चिगर अर्धा
०॥ मौजे तडसलूर पैकि चिगर अर्धा

एकूण एक चिगर जमीन खालसात पैकि इना
म करून देवून हे दानपत्र देवून लिहून दिले
सदरहू जमीन आपले पुत्र पौत्र वंशपरंपरा
अनभवून सरकारास कल्याण चिंतून सु

खरूप राहणे विधि दृष्टांत

ಮೋಡಿಯಲ್ಲಿನ ಮೇಲಿನ ಈ ಅರ್ಧ ಸಾಲುದಾನಪತ್ರದ ಬೆನ್ನುಪಾನಿನ ಮೇಲೆ ಮುಂದುವರೆದಿದೆ, ಅದರ ಕೆಳಗೆ ದಾನಕ್ಕೆ ಸಂಬಂಧಿಸಿದ ಸಂಸ್ಕೃತ ಶ್ಲೋಕವಿದೆ. ಅದು – ಮೂರುವರೆ ಸಾಲುಗಳಷ್ಟು ದೇವನಾಗರಿಯಲ್ಲಿದೆ, ನಂತರ ಮತ್ತೆ ಮೂರು ಸಾಲುಗಳಷ್ಟು ಮೋಡಿಯಲ್ಲಿನ ಬರಹ ಇದೆ, ಕಡೆಯ ಸಾಲಿನ ಕೊನೆಯಲ್ಲಿ ಹಳೆಯ ನಯಾ ಪೈಸೆ ಆಕಾರದಷ್ಟು ವರ್ತುಲಾಕಾರದಲ್ಲಿನ ಒಂದು ಮುದ್ರೆ / ಅಥವಾ ಆ ತರಹದ ಗುರುತೊಂದು ಇದೆ.

स्वदत्ता द्विगुणं पुण्यं परदत्तानु पालनं ॥ परदत्ता
पहारेण स्वदत्तं निष्फलं भवेत ॥१॥ स्वदत्ता दुहिता
भूमि परदत्ता सहोदरी ॥अन्नेदत्ता भवेन्नमाता यो हरे
त्रिषु संगमे ॥२॥

हे ध्यानात आणुन चालतील लिहून दिले
दानपत्र सही तारीख २९ रबिलावल  सु
खमस अशेरिन मयातैन व अल्फे हे विशेष (निशान)


ಟಿಪ್ಪಣಿಗಳು :
ರಬಿಲಾವಲ – ಅಗಸ್ಟ ತಿಂಗಳು ; ಸು –           ; ಖಮಸ – ೫  ; ಅಶೇರಿನ -೨೦ ; ಮಯಾತೈನ -೨೦೦ ; ಅಲಫೆ -೧೦೦೦ ಅರ್ಥಾತ – ೧೦೦೦ + ೨೦೦ + ೨೦ + ೫ = ೧೨೨೫.  ಇದಕ್ಕೆ ೬೦೦ ಕೂಡಿಸಿದಾಗ ಬರುವದು ಕ್ರಿ.ಶ.೧೮೨೫

ಡಾ.ಸಾವಂತ ಅವರು ಡಿಕ್ಟೇಶನ ಕೊಟ್ಟದ್ದು ೨೨-೧೦-೨೦೧೬ ಶನಿವಾರ

ಮನಿಯ ದಾನಪತ್ರ – ವಾಸುದೇವಾಚಾರ್ಯರ ಹೆಸರಿನಲ್ಲಿನದು

ಪುಟ ೧- ಮೇಲಿನ ಭಾಗ

ಪುಟ ೧- ಕೆಳ ಭಾಗ

ಪುಟ ೨

 

 

 

 

 

 

 

 

 

ಲಿಪ್ಯಂತರ

ಪುಟ ೧- ಮೇಲಿನ ಭಾಗ

वेद शास्त्र संपन्न राजमान्य राजश्री वासुदेवा
चार्य मंगळवेडेकर वस्ती मुरगोड स्वामीचे सेवेसी
विद्यार्थी  सिंदोजीराव नाईक निंबाळकर सरलष्कर कृ
तानेक दंडवत विद्न्यापना कुदिधारे सत्पात्र कुटुंब
वत्सल तुम्हास आंगण व परसुस जागेच संकोच होते
आपले घरच लगत ठाकुरसिंग याचा घरच जागा व सिडपडी
आहे तो जागा सरकारातून दत्त करून दिल्यास आंगण
परसू करून देऊन घेऊन सरकारास कल्याण चिंतून राहून
म्हणून करतिकोप्प (कोंडिकोप्प ?) प्रांत कित्तूर येथील मुक्कामी सूर्य
ग्रहण पर्वा दिवसि येऊन विदित केले त्याज
वरून जागता तुम्हास आंगण परसूस संकोच होते

ಪುಟ ೧- ಕೆಳ ಭಾಗ

ठाकूरसिंग यांचे घर आकार
रुंदि पूर्व पश्चिम  हात २२ बीवीस (बावीस)
लांबी उत्तर दक्षिण हात ४० चाळीस
हे घरच जागा आंगण शिवाय परसू जागा ठाकूरसिंग
बाबत लांबी एकॊजी सिंधे ह्याचा विहीर धरून जे
पावतो पूर्व पश्चिम रुंदि रामप्पा (—–?)
पंत मजुमदार ह्याचा परसूचा भिंतीस उत्तर दक्शिण
ऐसे घरच परसूचे जागा ठाकूर्सिंग ह्यांचा (—-?)
होत हे तुम्हास आंगणास परसू उपयोग दि
सू लागले जाणून सरी प्रमाणे ठाकूरसिंग ह्यांचा
परसू सुद्दा तुम्हास एकंदस्त करून
देवून हा दोन पत्र लिहून दिला आहे ते उप्भॊग
निधि निक्षॆप द्रव्य वगैरे निघातील सुद्दा

ಪುಟ ೨

तुमचे आहे तुम्ही घर आंगण परसू जे
पाहिजे ते करून घेवून तुम्ही तुमचे पुत्र पौत्र
परंपरा जागा अनवून अमचे दौलतीस श्री
महान श्रीमंत छत्रपति स्वामी ह्याचा रॊज
कल्याण चिंतून सुखरूप राहाणे यास हर
होणार नाही तारीख छ २९ माहे (–?)
अर्बा समान मयातैन अलफे मोर्तबा खुद्द (ನಿಶಾನಿ/ ಗುರುತು)

ಮೇಲಿನ ಮೋಡಿ ಬರೆಹದ ಕೆಳಗೆ, ಮನಿಯ ದಾನಪತ್ರ ಎಂದು ಕನ್ನಡದಲ್ಲಿ, (ನಂತರದಲ್ಲಿ ಬೇರೊಬ್ಬರು?) ಬರೆದದ್ದು ಇದೆ.

ವಾಸುದೇವಾಚಾರ್ಯರಿಗೆ ಮಾಡಿಕೊಟ್ಟ ಮತ್ತೊಂದು ದಾನಪತ್ರ.

ಪೂರ್ತಿ ಮೋಡಿ ಲಿಪಿಯ, ಎರಡು ತುಂಡಾದ ಕಾಗದ.  ಹದಿನಾರೂವರೆ ಸೆಂ.ಮೀ ಅಗಲ, ಇಪ್ಪತ್ತನಾಕು ಸೆಂ.ಮೀ ಉದ್ದದ (ಅಂದರೆ ಆರೂವರೆ ಇಂಚು ಅಗಲ, ಒಂಭತ್ತೂವರೆ ಇಂಚು ಉದ್ದ). ಕೊನೆಯಲ್ಲಿ ಮೋಡಿ ಲಿಪಿ ಅರ್ಥವಾಗದವರಿಗಾಗಿ ಕನ್ನಡದಲ್ಲಿ ದಾನಪತ್ರ ಎಂದು ಬರೆಯಲಾಗಿದೆ. ಅದಕ್ಕೂ ಮೊದಲು ವರ್ತುಲಾಕಾರದ ಮುದ್ರೆಯ ನಕಲೂ ಇದೆ. ದಪ್ಪ, ಉರುಟು – Blotting paper ದಂತಹ ಕೈಯಿಂದ ಮಾಡಿದ ಕಾಗದ. ಶ್ರೀಕಾರ ಬಿಟ್ಟು ೮ + ೮  ಹೀಗೆ ಒಟ್ಟು ೧೬ ಸಾಲುಗಳು.

ಮಾಧವರಾವ ಬೆಳವಿಯವರು ಇದನ್ನೂ ಪೂರ್ಣವಾಗಿ ಓದಲಿಲ್ಲ. ಆದರೆ ಕಾಗದವನ್ನು ಬರೆದು ಕೊಟ್ಟವರು ಸದಾಶಿವರಾವ ನಾಯಿಕ ಸರಲಷ್ಕರ (?) ನಿಂಬಾಳಕರ — ಛತ್ರಪತಿಗೆ ಕಲ್ಯಾಣ ಚಿಂತೂನ — ಶ್ರೀಮಂತ ಶಹಾಜಿರಾವ ಛತ್ರಪತಿಸ್ವಾಮಿ ಎಂಬ ಶಬ್ದಗಳಿವೆ. ಹೀಗೆ ತುಂಡು ತುಂಡಾಗಿ ಅದರಲ್ಲಿನ ಮಜಕೂರನ್ನು ಹೇಳಿದ್ದರು. ವರ್ಷ (?)

Archives

ಟಿಸಿಲು ೧


ಸಧ್ಯಕ್ಕೆ ಹಳೆಯ ದಾಖಲೆಗಳು ಯಾವವು ಲಭ್ಯವಾಗಿಲ್ಲ. ಲಭ್ಯವಾದ ಹಾಗೆ ಅವುಗಳನ್ನು ಈ ಪತ್ರಾಗಾರದಲ್ಲಿ ಸೇರಿಸಲಾಗುವದು.


ಟಿಸಿಲು ೨

ಟಿಸಿಲು ೩

ಹಳೆಯ ಕಾಗದ ಪತ್ರಗಳು
  1. ಭೀಮಾಚಾರ್ಯ ರಂಗಾಚಾರ್ಯ ಮಂಗಳವೇಢೆ (ಜ. ೧೮೫೦ರ ಆಸುಪಾಸಿನಲ್ಲಿ. ಮ. ೧೯೦೫ ಆಸುಪಾಸಿನಲ್ಲಿ) ಇವರ ಕಾಲದ ಕಾಗದ ಪತ್ರಗಳು
  2. ಶ್ರೀ ವಿಠ್ಠಲ ದೇವಸ್ಥಾನ ಕಿತ್ತೂರ ಮಾಘೋತ್ಸವ ೧೯೨೬
  3. ಭಾಗೀರಥಿಬಾಯಿ ಪುರಾಣಿಕ
  4. ಕೃಷ್ಟಾಚಾರ್ಯರ ಮರಣ ಉತಾರ
  5. ಜನ್ಮ ತಾರೀಖುಗಳು
  6. ರಂಗನಾಥ ಕೃಷ್ಟಾಚಾರ್ಯ ಮಂಗಳವೇಢೆ ಇವರಿಗೆ ಸಂಬಂಧಿಸಿದ ಕಾಗದ ಪತ್ರಗಳು
  7. ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ ಇವರಿಗೆ ಸಂಬಂಧಿಸಿದ ಕಾಗದ ಪತ್ರಗಳು
ಪತ್ರಗಳು
  1. ರಂಗಣ್ಣನವರು ಬರೆದ ಪತ್ರ (29-03-1950)
  2. ಪಾಂಡುಕಾಕಾ ಬರೆದ ಪತ್ರ (04-04-1950)
  3. ಅಣ್ಣಾರಾವ ಯಾರ್ದಿ ಅವರ ಪತ್ರ (07-04-1950)
  4. ವಿದ್ಯಾರ್ಥಿ ಗೋವಿಂದ ರಾಮಾಚಾರ್ಯ ಮಂಗಳವೇಢೆ ಬರೆದ ಪತ್ರ (25-2-1925)
ಹಸ್ತಾಕ್ಷರ / ಕೈಬರಹ
  1. ಕೈಸರ -ಇ – ಹಿಂದ ಭಾಗೀರಥಿಬಾಯಿ ಪುರಾಣಿಕ (೩ನೇ ಟಿಸಿಲು. ೬ನೇ ತಲೆಮಾರು)
  2. ವಿದ್ಯಾರ್ಥಿ ಗೋವಿಂದ ರಾಮಾಚಾರ್ಯ ಮಂಗಳವೇಢೆ ತಮ್ಮ ಹೆಸರನ್ನು ಬರೆದ ಕೈಬರಹವಿರುವ ಪಠ್ಯಪುಸ್ತಕ.
  3. ರಾಮಾಚಾರ್ಯ ಅನಂತಾಚಾರ್ಯ ಮಂಗಳವೇಢೆ (೩ನೇ ಟಿಸಿಲು. ೬ನೇ ತಲೆಮಾರು)
  4. ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ (೩ನೇ ಟಿಸಿಲು. ೭ನೇ ತಲೆಮಾರು)


ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೩

ಮೋಡಿಯಲ್ಲಿ ಬರೆದ ಹಳೆಯ ಕಾಗದಗಳು – ೩   (ಗೋವಿಂದಭಟ್ಟರ ಹೆಸರಿನಲ್ಲಿನದು)

ಗೋವಿಂದಭಟ್ಟರ ಕಾಲದ ಇನ್ನೊಂದು ಕಾಗದ – ಚಿತ್ರಭಾನು ಸಂವತ್ಸರದ ಭೂದಾನ ಪತ್ರ ಬರೆದಾದಮೇಲೆ ೩೧ ವರ್ಷಗಳ ನಂತರ – ಪ್ರಮಾಥಿ ನಾಮ ಸಂವತ್ಸರ – ಶಕೆ ೧೭೧೫ ರಲ್ಲಿ ಬರೆದ ಜಮೀನನ್ನು ಇನಾಮ ಆಗಿ ಮಾಡಿಕೊಟ್ಟ ಮತ್ತೊಂದು ಹಳೆಯ ಕಾಗದ. ಪರಾಮರ್ಶೆ ಮಾಡಿ ನೋಡಿದರೆ ಸಂವತ್ಸರದ ಹೆಸರನ್ನು ತಪ್ಪಾಗಿ, ಪ್ರಮಾಥಿ ಎಂದು ಉಲ್ಲೇಖಿಸಲಾಗಿದೆ ಎಂದು ಅನಿಸುತ್ತದೆ. ಅದು ಪ್ರಮಾದಿ ಎಂದಾಗಬೇಕಿತ್ತು.  

ಶಕೆ ೧೭೧೫ ಅಂದರೆ (೭೮ ಕೂಡಿಸಿದಾಗ ಬರುವ) ಕ್ರಿ.ಶ. ೧೭೯೩ ನೆ ಇಸವಿ. ಮೊದಲ ಕಾಗದ ಬರೆದ ೩೧ ವರ್ಷಗಳ ನಂತರ ಬರೆಯಲಾದುದು. ನನಗೆ ಸಿಕ್ಕಿದ್ದೂ ನಕಲು ಪ್ರತಿಯೆ ಇರಬೇಕು. ಮೊದಲನೆ ಕಾಗದದಂತೆಯೆ ಇರುವ ಒತ್ತುಕರಡಿನಂತಿರುವ ಕಿರಿಅಗಲದ ಉದ್ದನೆಯ ಕಾಗದ. ಮೊದಲ ನಕಲು ಪತ್ರದ ಲಿಪಿಕಾರನದೆ ಕೈಬರೆಹ. ಅದು ಶಕೆ ೧೭೧೫ ಇದ್ದುದೇ ಸರಿಯಾಗಿದ್ದರೆ,ಲಿಪಿಕಾರ ಸಂವತ್ಸರದ ಹೆಸರನ್ನು ತಪ್ಪಾಗಿ ಬರೆದಿದ್ದಾನೆ ಎಂದು ಕಾಣುತ್ತದೆ, ಏಕೆಂದರೆ,  ಸಂವತ್ಸರಗಳ ಕ್ರಮದಲ್ಲಿ ೧೩ನೆಯದು ಪ್ರಮಾಥಿ, ೧೬ನೆಯದು ಚಿತ್ರಭಾನು. ೪೬ ನೆಯದು ಪರಿಧಾವಿ, ೪೭ನೆಯದು ಪ್ರಮಾದಿ (ಅಥವಾ ಪ್ರಮಾದಿನ್). ಚಿತ್ರಭಾನುವಿನಲ್ಲಿ (ಶಕೆ ೧೬೮೪) ಬರೆದ ೩೧ ವ₹ರ್ಷಗಳ ನಂತರ ಬರೆದುದು ಎಂದರೆ ೪೭ ನೆ ಕ್ರಮಾಂಕದಲ್ಲಿ ಬರುವ ಪ್ರಮಾದಿ ನಾಮ ಸಂವತ್ಸರ (ಶಕೆ ೧೭೧೫). ಆದರೆ ಈ ಕಾಗದದಲ್ಲಿ ಹೆಸರಿಸಲ್ಪಟ್ಟಿದ್ದು ಪ್ರಮಾಥಿ ನಾಮ ಸಂವತ್ಸರ.

ಈ ತಪ್ಪಿಗೆ ನಾನು ಮೂರು ಕಾರಣಗಳನ್ನು ಊಹಿಸುತ್ತೇನೆ. ಇನ್ನೊಬ್ಬರು ಮೂಲಪ್ರತಿಯ ಮಜಕೂರನ್ನು ಓದುತ್ತ ಅಥವಾ ಹೇಳುತ್ತ ಹೋದಹಾಗೆ ಲಿಪಿಕಾರ ಅದನ್ನು ಕೇಳಿ ಬರೆದಿದ್ದರೆ, ಪ್ರಮಾದಿ ಎಂಬ ಶಬ್ದವನ್ನು ಕಿವಿ ಪ್ರಮಾಥಿ ಎಂದು ತಪ್ಪಾಗಿ ಗ್ರಹಿಸಿದ್ದೀತು. ಇಲ್ಲವೆ ನೋಡಿಕೊಂಡು ಬರೆದಿದ್ದರೆ, ಕೈತಪ್ಪಿನಿಂದಲೊ, ಅನವಧಾನದಿಂದಲೊ, ಹೆಚ್ಚೂಕಡಿಮೆ ಏಕರೂಪದಲ್ಲಿ ಕಣ್ಣಿಗೆ ಕಾಣುವ, ಏಕ ಉಚ್ಚಾರದ ಧ್ವನಿಯಲ್ಲಿ ಕಿವಿಗೆ ಬೀಳುವ, ಈ ಪ್ರಮಾದಿ ಎಂಬು ಶಬ್ದ ಬರವಣಿಗೆಯಲ್ಲಿ ಕಾಗದದ ಮೇಲೆ ಇಳಿದಾಗ ಪ್ರಮಾಥಿಯಾಗಿರುವ ಸಾಧ್ಯತೆಯೂ ಇದೆ. ಇದೂ ನಕಲು ಪ್ರತಿಯೆಂದೆ ನನಗೆನಿಸುತ್ತದೆ. ಕೊನೆಯ ಕಾರಣ, ಮೂಲ ಕಾಗದವನ್ನು ಬರೆದ ವ₹ರ್ಷದಲ್ಲಿಯೆ ಅಥವಾ ಮರುವರ್ಷ ನಕಲು ಪ್ರತಿ ತೆಗೆದಿದ್ದರೆ,  ಲಿಪಿಕಾರನು (ವಿಷಯವನ್ನು ಬಲ್ಲವನಾಗಿದ್ದರೆ) ಚಾಲ್ತಿಯಲ್ಲಿದ್ದ ಆ ಸಂವತ್ಸರದ ಹೆಸರನ್ನು ಹಾಗೆ ಬರೆಯುತ್ತಿರಲಿಲ್ಲ. ಇದು ಬಹಳ ವರ್ಷಗಳು ಗತಿಸಿದ ಮೇಲೆ ಮಾಡಿದ ಕೆಲಸವಾಗಿರ ಬೇಕು.

ಇನ್ನು ಇದರಲ್ಲಿನ ಉಳಿದ ವಿವರಗಳು : ಶುರುವಾತಿನಲ್ಲಿ ಮೇಲುಗಡೆ, ನಡುವೆ ಬರೆದ- ಶ್ರೀ ಕಾರದೊಂದಿಗೆ, ನಂತರ ಒಕ್ಕಣೆಯಲ್ಲಿ ಕಾಗದವನ್ನು ಬರೆದ ದಿನ – ಜ್ಯೇಷ್ಠ ವದ್ಯ ದ್ವಾದಶಿ, ಗುರುವಾರ.  ಪ್ರಾರಂಭದ, ದೇವನಾಗರಿ ಲಿಪಿಯಲ್ಲಿ ಬರೆಯಲಾದ ದೇವತಾ ಸ್ತುತಿಪರ ಸಂಸ್ಕೃತ ಶ್ಲೋಕ ನಮಸ್ತುಂಗಿ ….., ಸಂವತ್ಸರ ಇತ್ಯಾದಿ……ಯಾರಿಗೆಂದು ಉದ್ದೇಶಿಸಿ ಬರೆದುದು ಎಂದು ವಿವರಿಸುವ ೮ || ಸಾಲುಗಳು ಇವೆ. ನಂತರದ್ದು ಮೋಡಿ ಲಿಪಿಯಲ್ಲಿನ ಬರವಣಿಗೆ ೧೦ || ಸಾಲುಗಳು, ಮತ್ತೆ ೨ ಸಾಲು ದಾನಪತ್ರಗಳಲ್ಲಿ ರೂಢಿಯಂತೆ ಬರೆಯುವ  “ಸ್ವದತ್ತಾ ……” ಎಂಬ ಸಂಸ್ಕೃತದಲ್ಲಿನ ಎಚ್ಚರಿಕೆಯ ಮಾತುಗಳ ದೇವನಾಗರಿಯಲ್ಲಿ ಬರೆದ ಶ್ಲೋಕ, ಹೀಗೆ ೨೨ ಸಾಲುಗಳು, ನಂತರ ಅದೇ ಕಾಗದದ ಹಿಂದೆ  “ಸ್ವದತ್ತಾ …..” ಎಂಬ ಭೂಮಿಯ ವಿಶೇಷ ವರ್ಣನೆಯ ೨ ನೆ ಸಂಸ್ಕೃತ ಶ್ಲೋಕದ ೨ || ಸಾಲುಗಳು, ಕೊನೆಯಲ್ಲಿ ದಾನ ಪತ್ರದ ಉಳಿದ ಭಾಗ ಮೋಡಿಯಲ್ಲಿ ಬರೆದ ೨ || ಸಾಲುಗಳು ಹೀಗೆ, ಆ ಪಾನಿನ ಮೇಲೆ ಒಟ್ಟು ೫ ಸಾಲುಗಳು ಇವೆ.

ಲಿಪ್ಯಂತರ

ಮೊದಲ ಪಾನು

oldest_doc_1

श्री

नमस्तुंगि शिरस्तुंगि छ्त्रचामरवे
त्रैलॊक्यनगरारंभे मूलस्तंभाय शांभ
वे ॥१॥ स्वस्ति श्री नृपशालिवाहन श
के १७।१५ प्रमाथी नाम संवत्सर ज्यॆष्ठ
वद्य १२ गुरुवासरे वेदशास्त्र संपंन रा
जमान्य राजेश्री गॊविंदभट्ट बिंन मा
णीक भट्ट गॊत्र काश्यप सूत्र आश्वला
यन जॊशी मंगळवॆढे वास्तव्य मुरगॊड स्वा
मी याशी

लावरून आपण थोर सत्पात्र कुटुंब वत्सल हे जाणून उ
पजीविका बदल मौजे आलदकटी क. (कर्यात) मजकूर एथील खा
लसात जमीन पैकी अर्धा चिगर निधिनिक्षेप सहि
त इनाम करार करून देऊन चतुस्सीमा स्थापन करून
दिले असो आपले वंशपरंपरा अनुभव करून सरकारास
कल्याण चिंतून सुखरूप राहणे ह्या विषयी
कोणी दिकत करतिल त्यास कुलस्वामीचे शपत असे
या विषयी श्लोके
स्वदत्ता द्विगुणं पुण्यं परदत्तानुपालनं ॥ परद
त्तापहारेण स्वदत्ता निष्फलं भवेत ॥१॥

ಅದರ ಬೆನ್ನು ಪಾನು

oldest_doc_1

स्वदत्ता दुहिता भूमि परदत्ता सहोदरी
अन्यदत्ताभवेन्माता यो हरो त्रिषुसं
गमे ॥२॥
हे समजून कोणी दिकत न करिता चलउन देतील जाणी
जे छ २२ जिल्हेज सु अर्बा सितैन मयातैन व अलफे ब
हुत काय लिहिले विनंती मोर्तबा दस्तूर


ನನ್ನ ಟಿಪ್ಪಣಿಗಳು

ಈ ಭೂದಾನ ಪತ್ರದಲ್ಲಿ ಹೇಳಲಾದ ಸಂಖ್ಯೆಗಳು :
ಛ ೨೨ – ೨೨ ನೆ ತಾರೀಖು ; ಜಿಲ್ಲೇಜ – ಮೇ ತಿಂಗಳು ; ಅಲಫೆ – ೧೦೦೦ + ಮಯಾ ತೈನ – ೨೦೦ (?) + ಸಿತೈನ – ೬೦ + ಅರ್ಬಾ – ೪ = ೧೨೬೪. ಇದಕ್ಕೆ ೬೦೦ ಕೂಡಿಸಿದಾಗ = ಕ್ರಿ.ಶ.೧೮೬೪ ನೆ ಇಸವಿ ಬರುತ್ತದೆ.
ಆದರೆ ಕಾಗದದ ಪ್ರಾರಂಭದಲ್ಲಿಯೆ ದೇವನಾಗರಿಯಲ್ಲಿ ಬರೆದ ಶ್ಲೋಕದ ನಂತರ ಹೇಳಲಾದ ದಿನಾಂಕದ (ಹಾಗೂ ಯಾರಿಗೆ ಮಾಡಿಕೊಟ್ಟ ಕಾಗದ) ಪ್ರಕಾರ ಆ ದಿನ – ಶಕೆ ೧೭೧೫, ಪ್ರಮಾದಿ (ತಪ್ಪಾಗಿ ಪ್ರಮಾಥಿ ಎಂದು ಬರೆಯಲಾಗಿದೆ) ನಾಮ ಸಂವತ್ಸರದ ಜ್ಯೇಷ್ಠ ವದ್ಯ ದ್ವಾದಶಿ, ಗುರುವಾರ. ಇದನ್ನೆ ಕ್ರಿಸ್ತ ಶಕದಲ್ಲಿ ಪರಿವರ್ತಿಸಿ ಹೇಳುವದಾದರೆ – ಶಕೆ ೧೭೧೫ + ೭೮ = ಕ್ರಿ.ಶ.೧೭೯೩. ಮೊದಲಿನ ಕಾಗದದ ನಂತರದ ೩೧ನೆ ವ₹ರ್ಷ. ಅಲ್ಲದೆ ಈ ಕಾಗದವೂ ಗೋವಿಂದಭಟ್ಟರ ಹೆಸರಿನಲ್ಲೆ ಮಾಡಿಕೊಟ್ಟದ್ದು. ಈ ಎರಡು ಅಂಶ ಗಳನ್ನು ನೋಡಿದಾಗ ಮೋಡಿಯಲ್ಲಿ ಬರೆದ ಅರಬೀ ಸಂಖ್ಯಾವಾಚಕ ಶಬ್ದಗಳನ್ನು ಲಿಪ್ಯಂತರಮಾಡುವಾಗ ತಪ್ಪಾಗಿದೆ ಎಂದು ಅನಿಸುತ್ತದೆ.

ಈ ಕಾಗದದಲ್ಲಿ ಬಂದಿರುವ ಆ ಕಾಲದ ಮತ್ತೂ ಕೆಲವು ಶಬ್ದಗಳು :
ಕಮಾವೀಸದಾರ – ಮಾಮಲೇದಾರ ; ಥೋರ – ಹಿರಿಯ : ಕರ್ಯಾತ – ತಾಲೂಕು ; ಮಜಕೂರ – ಅಲ್ಲಿಯ ; ಖಾಲಸಾತ ಜಮೀನ – ಸರಕಾರಿ ಜಮೀನು ; ಭೂಸ್ವಾಸ್ಥಾ – ಭೂಮಿ ವ್ಯವಸ್ಥೆ ; ಮೋರ್ತಬಾ – (ಇನ್ನು) ಹೆಚ್ಚಿಗೇನೂ ಇಲ್ಲ.

ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೨

ಮೋಡಿಯಲ್ಲಿ ಬರೆದ ಹಳೆಯ ಕಾಗದಗಳು – ೨
(ಪೂಜಾ, ನಂದಾದೀಪ, ನಿತ್ಯ ನೈವೇದ್ಯಗಳಿಗಾಗಿ ಮಾಡಿದ ದಾನಪತ್ರ. ಗೋವಿಂದಭಟ್ಟರ ಹೆಸರಿನಲ್ಲಿನದು)
ಕ್ರಿ.ಶ. ೧೭೭೧ ನೆ ಇಸವಿ ಸೆಪ್ಟೆಂಬರ ೧ ರಂದು ಬರೆದ ಭೂದಾನ ಪತ್ರ

ಗೋವಿಂದಭಟ್ಟರ, ಮುರಗೋಡದಲ್ಲಿನ ಪ್ರಾರಂಭದ ದಿನಗಳಲ್ಲಿ ಬರೆಯಲಾದುದು –  confirmation of ಇನಾಂ (?) ಸಂಬಂಧದ ಕಾಗದ.

ಇಲ್ಲಿ ಒಂದು ಮಾತು ಹೇಳಬೇಕು. ಮುರಗೋಡದಲ್ಲಿ ನಮ್ಮ ಹಿರಿಯರಿರುತ್ತಿದ್ದ ಈಗ ಪಾಳುಬಿದ್ದು ಅವಶೇಷ ಸ್ಥಿತಿ – ರೂಪದಲ್ಲಿರುವ ಮನೆಯ ಬಹಳ ಹತ್ತಿರವೆ ಜಂಬುಲಿಂಗ ಹೆಸರಿನ ಸಾಕಷ್ಟು ಹಳೆಯ ಈಶ್ವರ ದೇವಸ್ಥಾನ ಈಗಲೂ ಇದೆ. ಬಹುಶಃ ನನ್ನ ಅಜ್ಜ – ದತ್ತಕ ಹೋಗಿದ್ದ ತಂದೆಯ ಜನಕ ತಂದೆ – ಶ್ರೀ ರಾಮಾಚಾರ್ಯರು ಆ ಗುಡಿಯ ಪೂಜಾ ಮಾಡುತ್ತಿದ್ದರೆಂದು ಅನಿಸುತ್ತದೆ. ಖಚಿತವಾಗಿ ಹೇಳಲಾರೆ.

ಹನ್ನೆರಡೂವರೆ ಸೆಂ. ಮೀ. ಅಗಲ ಮತ್ತು ೨೨ ಸೆಂ. ಮೀ ಉದ್ದದ (ಐದು ಇಂಚು ಅಗಲ ಮತ್ತು ಏಳೂವರೆ ಇಂಚು ಉದ್ದ) ಕಾಗದದಲ್ಲಿ ಒಟ್ಟು ಹದಿನೆಂಟೂವರೆ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. (ಮೇಲು ಪಾನಿನ ಮೇಲೆ, ನಡುವೆ ಶ್ರೀಕಾರದ ಸ್ಥಳದಲ್ಲಿ ಬರೆದ ಶ್ರೀ ಶಂಭು ಪ್ರಸನ್ನ (?)  ಮತ್ತು ಕೆಳಗೆ ಎಡ ಮೂಲೆಯಲ್ಲಿ ಒಂದು ಶಬ್ದ ಮತ್ತು ಬಲ ಮೂಲೆಯಲ್ಲಿ ನಕಲ (ಎಂಬ ಶಬ್ದ) ನಂತರ ಮುಖ್ಯ ಮಜಕೂರು ಒಂಬತ್ತು ಸಾಲುಗಳಲ್ಲಿ,  ಅದರ ಮುಂದಿನ ಭಾಗ ಒಂಬತ್ತೂವರೆ ಸಾಲುಗಳು ಬೆನ್ನುಪಾನಿನ ಮೆಲೆ, ಕೊನೆಯಲ್ಲಿ, ಕೆಳಗಿನ ಬಲ ಮೂಲೆಯಲ್ಲಿ ಸಹಿ, ಹೀಗೆ ಲಿಖಿತವಾಗಿದ್ದಿದೆ.

ಲಿಪ್ಯಂತರ

ಮೊದಲ ಪಾನು

oldest_doc_1

श्री शंभु

शभुलिंग                                   नकल

राजश्री गणेश बल्लाळ हवलदार
परगणा मुरगोड गोसावि यासि
अखंडित लक्ष्मीअलंकृत राजमान्य राजश्री जीवाजी
भोसले तालुक मनोळि दंडवत
विनंती उपरि वा राजश्री श्री गोविदभ
ट जोशी मंगळवेडकर वस्ती मजकूर याज कडे क
सबा मजकूर श्री देवाचि पूजा आहे श्री
देवाचे नंदादीप व नित्य नैवेद्य व मंत्र
पुष्प आराधना बदल  धर्मादाव जमीन चिगर

ಅದರ ಬೆನ್ನು ಪಾನು

oldest_doc_1

०॥० मौजे दुंडीकोप पैकि नंदादीप बदल
०॥० मौजे कारीमनि पैकि नित्य नैवेद्य व

मंत्रपुष्प वगैरे आराधना बदल

एकूण एक चिगर पेसजि अमल पासून चालत आहे
त्यास हालि सुभेचे पत्राचे उजूर केला म्हणेन
विदित केला त्या वरून हे पत्र लिहिला आहे तरी माजी अमल
पासून चालत आल्या प्रमाणे सारी जमीन चाल
वणे दुसरे पत्राचे उजूर न करणे रा ॥ छ १ । रबिलकर
सु इहिदे सबैन मया व अलफे बहुत काय लिहिणे
हे विनंती


ನನ್ನ ಟಿಪ್ಪಣಿಗಳು

ಈ ಭೂದಾನ ಪತ್ರದಲ್ಲಿ ಬಂದಿರುವ ಅರಬೀ ಭಾಷೆಯ ಇಸವೀ ಸೂಚಕ ಶಬ್ದಗಳು :
ಛ ೧ – ೧ನೆ ತಾರೀಖು ;  ರಬಿಲಾಕರ – ಸೆಪ್ಟೆಂಬರ  ; ಅಲಫೆ – ೧೦೦೦ + ಮಯಾ – ೧೦೦ +  ಸಬೈನ – ೭೦ + ಇಹಿದೆ – ೧ = ೧೧೭೧ ಇದಕ್ಕೆ ೬೦೦ ಕೂಡಿಸಿದರೆ = ಕ್ರಿ.ಶ.೧೭೭೧ ನೆ ಇಸವಿ ಸೆಪ್ಟೆಂಬರ ೧ ಎಂದಾಗುತ್ತದೆ.

ಆ ಕಾಲದಲ್ಲಿ ಬಳಸುತ್ತಿದ್ದ ಕೆಲವು ಶಬ್ದಗಳು :
ಉಪರಿ – ನಿಮಗೆ ;   ಮಜಕೂರ – ಸ್ಥಳೀಕರು  ;  ಪೇಸಜಿ – ಹಿಂದಿನ ಆಡಳಿತ/ ಸರಕಾರ :  ಹಾಲಿ – ಸಧ್ಯದ  ;                ಸುಭೆ – ಸರಕಾರ ;  ಉಜೂರ – ಹಾಜರ ಪಡಿಸುವದು ;  ಅಮಲ ಪಾಸೂನ – ಹಿಂದಿನಿಂದ

ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೧

ಮೋಡಿಯಲ್ಲಿ ಬರೆದ ಹಳೆ ಕಾಗದಗಳು – ೧  (ಗೋವಿಂದಭಟ್ಟರ ಹೆಸರಿನಲ್ಲಿನದು)

(ಭೂ?) ದಾನ ಪತ್ರ – ಶಕೆ ೧೬೮೪, ಚಿತ್ರಭಾನು ಸಂವತ್ಸರ, ಫಾಲ್ಗುಣ ವದ್ಯ (ಕೃಷ್ಣ ಪಕ್ಷ) ತ್ರಯೋದಶಿ, ಮಂದವಾಸರ (ಶನಿವಾರ) ದಿನದಂದು ಬರೆದುಕೊಟ್ಟ ಕಾಗದ (ನಕಲು ಪ್ರತಿ).  ಕ್ರಿಸ್ತ ಶಕದಲ್ಲಿ ಈ ದಿನಾಂಕದ ಪರಿವರ್ತನೆ : ಶಕೆ ೧೬೮೪ + ೭೮ =  ಕ್ರಿ.ಶ. ೧೭೬೨. ಆದರೆ ಫಾಲ್ಗುಣ ಮಾಸವು ಸಂವತ್ಸರದ ಕೊನೆಯ ತಿಂಗಳು ಮತ್ತು ಅದು ಬರುವಾಗ ಮುಂದಿನ ಕ್ರಿಸ್ತ ಶಕ ಇಸವಿ ಬಂದಿರುತ್ತದೆ. ಹೀಗಾಗಿ ಈ ಕಾಗದವನ್ನು ಬರೆದ ವರ್ಷ  ಕ್ರಿ.ಶ.೧೭೬೩ (ಎಪ್ರಿಲ ತಿಂಗಳು).

ಲಿಪ್ಯಂತರ
oldest_doc_1

श्री
नमस्तुंगि सिरस्तुंगि छेत्र चामरवे त्रैलोक्य
नगरारंभ मुलस्तम्भाये शांभवे ॥विष्णुशक्तीस
मुत्पन्ने शंखवर्ण महितले आनेक रत्न संभुते भु
मिदेवि नमोस्तुते स्वस्ति श्री जयाभ्युदये श्री म
नृप शालिवाहन शके १६७४ चित्रभानुनाम संव
त्सरे फालगुण वदि त्रयोदशि मंदवासरे ॥ वॆदशा
स्त्र संपन्न राजमान्ये राजेश्री गोविंदभट पितामा
णिकभट गोत्र कास्यप सुत्र अस्वलायन जोतिसि
मंगळवेढे सांप्रत वास्तव्य मुरगोड स्वामिचे शेवे
सि

कृष्णाबायि व नीलकंठराव सिंधे साहेब सुभा दंडवत
सुहूर सन सलास सितैन मया व अलफे लिहुन दिले भूदान पत्र असेजे

ಪ್ರಾರಂಭದಲ್ಲಿ ದೇವನಾಗರಿಯಲ್ಲಿ ಬರೆದ ಶ್ಲೋಕ ಮತ್ತು ಕಾಗದವನ್ನು ಬರೆದ  ಶಕೆ, ಸಂವತ್ಸರ,  ಮಾಸ, ಪಕ್ಷ, ತಿಥಿ ಮತ್ತು ಯಾರ ಹೆಸರಿನಲ್ಲಿ ಮಾಡಿಕೊಟ್ಟ ಕಾಗದ  ವಿವರಗಳು ಇವೆ. ಮುಂದಿನ ಎರಡು ಸಾಲುಗಳಲ್ಲಿನವು ಮೋಡಿಯಲ್ಲಿ ಲಿಖಿತವಾದವು. ಆಲ್ಲಿಗೆ ಉದ್ದವಾಗಿದ್ದ ಆ ಕಾಗದ ಅರ್ಧಕ್ಕೆ ಕತ್ತರಿಸಿ ಹೋಗಿದ್ದು,  ಉತ್ತರಾರ್ಧ  ಸಿಗದೆ ಹೋಗಿ  ಅದರಲ್ಲಿನ ಮಾಹಿತಿ ಅಷ್ಟರಮಟ್ಟಿಗೆ ಅಪೂರ್ಣವಾಗಿದೆ.  ಮೋಡಿಯಲ್ಲಿನ ಆ ಎರಡು ಸಾಲುಗಳು:


ನನ್ನ ಟಿಪ್ಪಣಿಗಳು
ಈ ಲಿಪ್ಯಂತರವನ್ನು ೧೪-೧೦-೨೦೧೬ ರಂದು ಮಾಡಿಕೊಟ್ಟ ಡಾ. ಸಾವಂತ ಅವರಿಂದ ಕೇಳಿತಿಳಿದ, ಪ್ರಸ್ತುತ ದಾಖಲೆಯಲ್ಲಿ ಉಲ್ಲಿಖಿತವಾಗಿರುವ ಕೆಲವು ಅರೆಬಿಕ್ ಸಂಖ್ಯಾವಾಚಕ,ಇಸವಿ ಮತ್ತು ತಾರೀಖು ನಿರ್ದೇಶಕ ಶಬ್ದಗಳ ಜಂತ್ರಿ :
ಇಹಿದೆ – ೧ ;   ಇಸನೆ – ೨ ;    ಸಲಾಸ – ೩ ;   ಅರಬಾ (ಅರ್ಬಾ) – ೪ ;   ಖಮಸ – ೫ ;   ಸೀತ್ – ೬ ;   ಸಬ್ಬಾ – ೭; ಸಮಾನ್ – ೮ ;     ಟಿಸ್ಸಾ – ೯ ; ಅಶೇರ – ೧೦ ;   ಮಯಾ – ೧೦೦ ;   ಅಲಫೆ – ೧೦೦೦

(ಉರ್ದು /  ಪರ್ಸಿಅಯನ್ ಲಿಪಿಯನ್ನು ಬಲಗಡೆಯಿಂದ ಎಡಗಡೆ ಓದಬೇಕು) ಮತ್ತು   ಅರೆಬಿಕ್ / ಹಿಜರಿ  ವರ್ಷ- ಇಸವಿಗಳನ್ನು ಕ್ರಿಸ್ತ ಶಕ ಇಸವಿಗೆ ಹೊಂದಿಸಲು,  ಆ ಸಂಖ್ಯೆಗೆ ೬೦೦ನ್ನು ಕೂಡಿಸಬೇಕು.

ಈ  ದಾನಪತ್ರದಲ್ಲಿ ಹೇಳಲಾದ ಸಂಖ್ಯೆಗಳು : ಅಲಫೆ  – ೧೦೦೦ +  ಮಯಾ – ೧೦೦ + ಸಿತೈನ – ೬೦ +  ಸಲಾಸ – ೩ =  ೧೧೬೩ ಈ ಸಂಖ್ಯೆಗೆ + ೬೦೦ (ಕೂಡಿಸಿದಾಗ)  =  ಕ್ರಿ.ಶ. ೧೭೬೩ ನೆ ಇಸವಿ.

ಮತ್ತೂ ಕೆಲವು, ಪೇಶವೆ  ಕಾಲದಲ್ಲಿ ಬಳಕೆಯಲ್ಲಿದ್ದ ಶಬ್ದಗಳು:
ಸುಭಾ – ಜಿಲ್ಲೆ  ; ಪರಗಣಾ – ತಾಲೂಕು ; ಮೌಜೆ – ಗ್ರಾಮ ; ಮದರೆ – ಕೆಲವೆ ಮನೆಗಳಿದ್ದ ಅತಿ ಚಿಕ್ಕ ಗ್ರಾಮ

1 5 6 7 8 9 32